Sunday, 9 August 2009
Wednesday, 15 April 2009
Monday, 9 June 2008
ಕಳೆದುಹೋದ ತುಂಗೆಯ ಸಾಹಸಯಾನ


' ಕಾನೂರು ಹೆಗ್ಗದತಿಯಲ್ಲಿ ' (ಇಲ್ಲಿ ದ ತಪ್ಪಾಗಿದೆ ) ಆರಂಭದಲ್ಲಿಯೀ ಕುವೆಂಪು ಅವರು ಪರಿಚಯಿಸುವ ಕುರುವಳ್ಳಿಯ ಕಿರು ಪೀಟೆಗೂ ತೀರ್ಥಹಳ್ಳಿಗೂ ಸಂಪರ್ಕ ಕಲ್ಪಿಸುತ್ತಿದ್ದ ರಾಮತೀರ್ಥದ ಕಲ್ಲು ಸಾರದ ಅವಶ್ಯಕತೆ ಈಗ ಇಲ್ಲ . ಈಗ ತುಂಗೆಗೆ ಬೃಹತ್ ಸೇತುವೆ ನಿರ್ಮಾಣವಾಗಿದೆ .ಇದರಿಂದಾಗಿ ಮಳೆಗಾಲದಲ್ಲಿ ಉಕ್ಕಿ ಸೊಕ್ಕಿ ಹರಿಯುತ್ತಿದ್ದ ತುಂಗೆಯನ್ನು ದಾಟಲು ಬಳಸುತ್ತಿದ್ದ ಹರಿಗೋಲುಗಳ ಅವಶ್ಯಕತೆಯೂ ಈಗ ಇಲ್ಲ .
'ಮಲೆಗಳಲ್ಲಿ ಮದುಮಗಳಿನ ತುಂಗೆಯ ರುದ್ರ ರಮಣೀಯ ಆರ್ಭತದೆದುರು ಜೀವಗಳನ್ನು ಕೈಯ್ಯಲ್ಲಿ ಹಿಡಿದು ಪಯಣಿಸುತ್ತಿದ್ದ ಆ ಪಯಣಿಗರ ಸಾಹಸ ಯಾನ ಇನ್ನೆಲ್ಲಿ ?
ಕಾದಂಬರಿಯಲ್ಲಿ ಪುಟಗಟ್ಟಲೆ ವ್ಯಾಪಿಸಿರುವ ತುಂಗಾ ಯಾನದ ವಿವರಗಳು ಓದುಗನನ್ನೂ ನದಿಯ ಸೆಳವಿನೊಳಗೆ ಸೆಳೆದುಕೊಳ್ಳುತ್ತಿದ್ದ ಆ ಸುಮನೋಹರ ಭಯಂಕರ ವರ್ಣನೆಗಳು ಇನ್ನೆಲ್ಲಿ ?
ನಾಗರಿಕತೆಯ ಸವಲಭ್ಯಗಳುಮನುಷ್ಯ ಜೀವನದ ರೋಚಕತೆ , ಸಂಭ್ರಮ , ಕುತೂಹಲಗಲನ್ನು ಕೊಂದು ಹಾಕಿ ಬದುಕನ್ನು ನಿರ್ಜೀವ ಯಾನ್ತ್ರಿಕವನ್ನಾಗಿಸುತ್ತಿವೆಯೇ ?
Sunday, 8 June 2008
ತುಂಗೆಯ ಸಲಿಲ

ಶೃಂಗೇರಿಯ ಬಳಿಯಲ್ಲಿ ಹರಿಯುತ್ತಿರುವ ತುಂಗೆಯು ಸುತ್ತಲೂ ಹಬ್ಬಿದ ಮಲೆಗಳಿಂದ ತಬ್ಬಿದ ಕಾನನದಿಂದ ತನ್ನ ಶುಭ್ರ ಸಲಿಲ ಜಲದಿಂದ ಮನೋಹರವಾಗಿ ಕಂಗೊಲಿಸುವಳು ಇಲ್ಲಿನ ವಿದ್ಯಾ ಶಂಕರ ದೇವಾಲಯವು ಹೊಯ್ಸಳ ಮಾದರಿಯಲ್ಲಿ ರಚಿಸಿದ ಒಂದು ಸುಂದರ ದೇವಾಲಯ . ಕ್ಷೇತ್ರ ದೇವತೆ ಶಾರದಾನ್ಬೆಯು ಭಾವುಕರ ಮನತಣಿಸುವ ವಿದ್ಯಾಧಿ ದೇವತೆ . ಶಂಕರಾಚಾರ್ಯರು ಸ್ಥಾಪಿಸಿದ ಚತುರಾಮ್ನಾಯ ಪೀಥಗಳಲ್ಲಿ ಇದು ಮೊದಲನೆಯದು .
Friday, 11 April 2008
Sunday, 6 April 2008
ಕನ್ನಡ ನಾಡಿನಲ್ಲಿ ಯುಗಾದಿಯು ಒಂದು ಮುಖ್ಯವಾದ ಸಂಭ್ರಮದ ಹಬ್ಬ , ಇದು ಕನ್ನಡಿಗರಿಗೆ ಮತ್ತು ತೆಲುಗರಿಗೆ ಇಬ್ಬರಿಗೂ ಹೊಸ ವರ್ಷಾರಂಭ . ಪಂಚಾಂಗ ಶ್ರವಣ , ಹೊಸ ಉಡುಗೆಗಳ ಧಾರಣೆ ಇವೆಲ್ಲಾ ಈ ಹಬ್ಬದ ವಿಶೇಷಗಳು ,ಇಲ್ಲಿನ ಅತಿ ಮುಖ್ಯ ಕಾರ್ಯಕ್ರಮಗಳಲ್ಲಿ ಒಂದು ಬೇವು ಬೆಲ್ಲ ತಿನ್ನುವುದು, ಇದು ಜೀವನದ ಸಿಹಿ ಕಹಿಗಳನ್ನು ಸಮಾನವಾಗಿ ಸ್ವೀಕರಿಸಲು ಪ್ರೇರಣೆ ನೀಡುತ್ತದೆಂಬ ನಂಬಿಕೆಯಿಂದ ಬಂದ ಪದ್ಧತಿ . ನಾನು ಒಬ್ಬ ಕನ್ನಡಿಗನಾಗಿ ಎಲ್ಲ ನನ್ನ ಸಹ ಮಾನವರಿಗೆ ನನ್ನ ಹಬ್ಬದ ಮೂಲಕ ಶುಭಾಶಯ ಗಳನ್ನು ಕೋರುತ್ತೇನೆ
Subscribe to:
Posts (Atom)



