Thursday 21 February 2008

ಇಲ್ಲಿ ಕೆಲವೊಂದು ತೊಂದರೆಗಳಿವೆ , ನನ್ನ ಕಂಪ್ಯೂಟರ್ನಿಂದ ಅಪ್ ಲೋಡ್ ಮಾಡಿದ ಲೇಖನ ಕನ್ನಡ ಲಿಪಿಯಲ್ಲಿ ಬಂದಿಲ್ಲ . ಸಂಕೇತ ಲಿಪಿಯಲ್ಲಿ ಬಂದಿದೆ . ಹೇಗೆ ಸರಿ ಮಾಡಬೇಕು ? ಬಲ್ಲವರು ತಿಳಿಸಿ . ಮತ್ತು ಅಪ್ಲೋಡ್ ಮಾಡಿದ ಫೋಟೋ ಗಳು ಸಹ ಅಪ್ಲೋಡ್ ಆಗುವದಿಲ್ಲ , ಈ ಬಗ್ಗೆ ಮಾಹಿತಿ ಕೊಟ್ಟರೆ ಧನ್ಯವಾದಗಳು

Monday 18 February 2008

ಕನ್ನಡ ಭಾಷೆಯ ಅಳಿವು ಉಳಿವು

ಈಗ ಕನ್ನಡದಂತಹ ಪ್ರಾದೇಶಿಕ ಭಾಷೆಗಳ , ಅಳಿವು ಉಳಿವಿನ ಬಗ್ಗೆ ಹುಯಿಲೆದ್ದಿದೆ .ಆಧುನಿಕ ಜಗತ್ತಿನ ತಂತ್ರ ಜ್ಞಾನದ ಹುಚ್ಚ್ಚು ಹೊಳೆಯಲ್ಲಿ , ಅನೇಕ ಭಾಷೆಗಳು ಕೊಚ್ಚಿ ಹೋಗುತ್ತವೆನ್ನುವ ಆತಂಕ ಆಯಾಯ ಭಾಷಿಕರ ಮನದಲ್ಲಿ ಶಂಕೆಯಛಾಯೆಯನ್ನು ಮೂಡಿಸಿದೆ .

ಕನ್ನಡದಂತಹ ಎರಡು ಸಾವಿರಕ್ಕೂ ಹೆಚ್ಚು ವರ್ಷಗಳ ಇತಿಹಾಸವನ್ನು ಹೊಂದಿರುವ ; ಸಮ್ವ್ರುದ್ದ ನುಡಿಗಟ್ಟು ಗಳಿಂದ ಕೂಡಿರುವ ಸುಂದರವಾದೊಂದು ಭಾಷೆ ಅಳಿಯುವುದೆಂದರೆ ,ಅದರದೇ ಆದ ಸಂಸ್ಕೃತಿ , ಜಾನಪದ ವಿಶಿಷ್ಟತೆಗಳು ,ನಂಬಿಕೆ , ಆಚರಣೆ, ಭಾಷಾಲಯ ಎಲ್ಲವೂ ಎಂದರೆ ಎಲ್ಲವೂ ,ಕೊಟ್ಯಾಂತರದ ಜನಮಾನಸದ ಅನೇಕ ಮಜಲುಗಳು ನಾಶವಾಗಿ ಹೊದಂತೆಯೇ ಸರಿ .
ಆದರೆ ಈ ಭಾಷಾ ನಾಶದ ಆತಂಕ ,ಭಯ , ಗೊಂದಲ ಎಲ್ಲವೂ ನಿರಾಧಾರ ವೆನ್ನುವುದು ಅತ್ಯಂತ ಸಂತಸದ ಸಂಗತಿ .
ಯಾವ ವಿದ್ಯುನ್ಮಾನ ಮಾಧ್ಯಮಗಳು , ಪ್ರಾದೇಶಿಕ ಭಾಷೆಗಳನ್ನು ಕೊಲ್ಲುತ್ತವೆಂದು ಆತಂಕಪಡಲಾಗಿತ್ತೋ ,ಅವೇ ಮಾಧ್ಯಮಗಳು, ಇಂದು ಪ್ರಾದೇಶಿಕ ಭಾಷೆಗಳಿಗೆ ಬಹು ಆಯಾಮಗಳನ್ನು ಒದಗಿಸಿ ವಿವಿಧ ರೀತಿಯಲ್ಲಿ ಬೆಳೆದು ವಿಸ್ತರಿಸಲು ಅವಕಾಶ ಕಲ್ಪಿಸುತ್ತಿರುವುದು ಅತ್ಯಂತ ಸಂತಸದ ಸಂಗತಿ .
ಈ ರೀತಿಯ ವಿದ್ಯಮಾನಕ್ಕೆ ಎಲೆಯ ಮರೆಯ ಕಾಯಿಯಂತೆ ಕಾರ್ಯ ಪ್ರವ್ರುತ್ತರಾಗಿರುವ ಅನೇಕ ಸುಸಂಸ್ಕೃತ ಮನಸ್ಸ್ಸುಗಳು ಅಭಿನಂದನಾರ್ಹವಾದವುಗಳು.
ಬಹು ಹಿಂದೆಯೇ ಕನ್ನಡಕ್ಕೆ ಶ್ರೀ ಲಿಪಿಯಂತಹ ಬರಹ ಮಾಧ್ಯಮವನ್ನ್ನು ರೂಪಿಸಿದ ಕೆ.ಪಿ. ರಾವ್ , ಬರಹದಂತಹ ಸರಳ ಲಿಪಿಯನ್ನು ಶೋಧಿಸಿ ಕೊಟ್ಟ ವಾಸು (ಕನ್ನಡದಲ್ಲಿ ನಡೆದ ಈ ಬೆಳವಣಿಗೆಯೇ ಭಾರತೀಯ ಭಾಷೆಗಳ ಲಿಪಿಗಳಿಗೆ ಪ್ರೇರಣೆಯಾ ಯಿತೆನ್ಬುದನ್ತೂ ಇನ್ನು ಸಂತಸದ ಸಂಗತಿ .)
ಅಂತರ್ಜಾಲ ಲೋಕದಲ್ಲಿ ಆರಂಭದಲ್ಲಿ ಕನ್ನಡವನ್ನು ಕಟ್ಟಲು ಶ್ರಮಿಸಿದ , ಯು .ಬಿ. ಪವನಜ , ಸಂಪದದಂತಹ ಲೋಕಪ್ರಿಯ ತಾಣವನ್ನು ರೂಪಿಸಿದ ,ಹರಿಪ್ರಸಾದ ನಾಡಿಗರು ಮತ್ತವರ ಮಿತ್ರರು, ಇಂತಹವರ ಕನ್ನಡದ ಮೇಲಿನ ಪ್ರೀತಿಯೇ ಇಂದು ಅಂತರ್ಜಾಲದಲ್ಲಿ ಕನ್ನಡ ತಲೆ ಎತ್ತಿ ನಿಲ್ಲಲು ಅನುಕೂಲ ಸನ್ನಿವೇಶ ವನ್ನೋದಗಿಸಿದೆ .
ಅತಿ ದೊಡ್ಡ ವ್ಯಾಪಾರಿ ಕಂಪನಿ ಗಳಾದ ಗೂಗಲ್ , ಯಾಹೂ , ರೇಡಿಫ್, ಮುಂತಾದವರೆಲ್ಲ ಪ್ರಾದೇಶಿಕ ಭಾಷೆಗಳ ಕಡೆಗೆ ಗಮನ ಹರಿಸಿರುವುದು , ಇದರಿಂದಾಗಿ ಕನ್ನಡ ಎಲ್ಲ ಕಡೆ ವಿಸ್ತರಿಸುತ್ತಾ ಹೊಸ ಜಗತ್ತಿನ ಸವಾಲುಗಳಿಗೆ ಹೊಂದಿಕೊಳ್ಳುತ್ತಾ ,ಪತ್ರಿಕೆಗಳು ,ಪುಸ್ತಕಗಳು , ಲೇಖನಗಳು , ವಿಕೆಪಿಡಿಯ, ಬ್ಲಾಗುಗಳು ಹೀಗೆ ಅಂತರ್ಜಾಲದಲ್ಲಿ ಶ್ರೀ ಮಂತ ಗೊಳ್ಳುತ್ತ , ಕನ್ನಡ ವಿಸ್ತಾರವಾಗಿ ಬೆಳೆದು ಪ್ರೌಢ ವಾಗುತ್ತಾ ಹೋಗುವುದರಲ್ಲಿ ಯಾವುದೇ ಅನುಮಾನವಿಲ್ಲ .

Sunday 17 February 2008

ಪರೀಕ್ಷಾರ್ಥವಾಗಿ

ನನ್ನ ಮೊದಲನೆಯ ಬ್ಲಾಗ್ ಬರಹ ಕಳೆದುಹೋದುದನ್ನು ತಿಳಿಸಿದ್ದೆ ನಷ್ಟೇ ,ಪುನಃ ಯಾವ ರೀತಿಯಲ್ಲಿ ಬ್ಲಾಗ್ ಮಾರ್ಪಾಟಾಗುತ್ತದೆ ಎಂದು ಪರೀ ಕ್ಷಾರ್ಥವಾಗಿ , ಈ ಎರಡನೆಯ ಬ್ಲಾಗನ್ನು ಬ್ಲಾಗಿಸುತ್ತಿದ್ದೆನಷ್ಟೇ , ಅಂತಹ ವಿಷ ಯವೇನಿಲ್ಲ . ಇದೆಲ್ಲ ಕೇವಲ ಪರೀ ಕ್ಷಾ ರ್ಥ ಪ್ರಯೋಗ ಮಾತ್ರ . ಇದೇಅಂಕಣದಲ್ಲಿ ಮುಂದೆ ಬರಹಗಳು ಬರುತ್ತವೆ ಎಂದು ಈಗ ನಿಮ್ಮನ್ನು ಹೆದರಿಸಬಲ್ಲೆ .ಹೆದರಬೇಡಿ , ನಿಮಗೂ ಸಹ ನನ್ನನ್ನು ಹೆದರಿಸುವ ಸ್ವಾತಂತ್ರವು ,ಈ ಮುಕ್ತ ಯುಗದಲ್ಲಿ ಇದ್ದೇಇದೆಯಲ್ಲವೇ ? ನೋಡೋಣ ಪರಸ್ಪರ ಹೇಗೆ ಹೆದರಿಸುತ್ತೆವೆಯೋ ? ಅಥವಾ ವಿಚಾರಗಳನ್ನು ಪ್ರಚೊದಿಸುತ್ತೆ ವೆಯೋ ? ಮತ್ತೆ ಭೇಟಿಯಾಗೋಣ

ಸಮಸ್ತ ಕನ್ನಡ ಬಂಧುಗಳಿಗೆ

ಈ ಮುಂಚೆ ಕನ್ನಡದಲ್ಲಿ ಬರೆಯಲು ಆರಂಭಿಸಿದ್ದೆನಾದರು ಕಂಪ್ಯೂಟರಿನ ಅಡಚಣೆಯಿಂದ ಮೊದಲ ಬರಹ ಕಾಣೆಯಾಗಿದೆ . ಪುನಃ ಹೊಸದಾಗಿ ಬರೆಯುತ್ತಿದ್ದೇನೆ .ಇಲ್ಲಿ ನನ್ನ ಅನೇಕ ಭಾವನೆಗಳನ್ನು ಸಮಾನರೊಂದಿಗೆ ಹಂಚಿಕೊಳ್ಳುವ ಅವಕಾಶ ಲಭಿಸಿರುವುದು ತುಂಬ ಸಂತಸ ತಂದಿದೆ . ತತ್ ಕ್ಷಣದಲ್ಲಿ ಏನೂಹೇಳಲಾರೆನಾದರೂ , ಆರಂಭದ ಭಾವನೆಗಳಾಗಿ ,ನನ್ನೆಲ್ಲ ಕನ್ನಡ ಬಲ್ಲ ಮಿತ್ರರೊಂದಿಗೆ ಇಲ್ಲಿ ಸಂವಹನ ಸಾಧ್ಯವಾಗಿರುವುದಕ್ಕೆ , ಹರ್ಷ ವ್ಯಕ್ತಪದಿಸುತ್ತಾ , ಮತ್ತೆ ಭೇಟಿಯಾಗುತ್ತೇನೆ .