Sunday 2 March 2008

ಚಿತ್ರದುರ್ಗದಲ್ಲಿ ಅಭಿರುಚಿ

ಕಳೆದ ಆರು ವರ್ಷಗಳಿಂದ ಸತತವಾಗಿ ಚಿತ್ರದುರ್ಗದಲ್ಲಿ ಅಭಿರುಚಿಯ ಕಾರ್ಯಕ್ರಮಗಳು ನಡೆದುಕೊಂಡು ಬರುತ್ತಿವೆ . ಸಾಹಿತ್ಯ ಮತ್ತು ಸಂಸ್ಕೃತಿಗೆ ಸಂಭಂಧಪಟ್ಟಂತೆ ತುಂಬ ಒಳ್ಳೆಯ ಕಾರ್ಯಕ್ರಮಗಳು ನಡೆದಿವೆ. ಅಭಿರುಚಿಯನ್ನು ಆರಂಭಿಸಿದ್ದು ಡಿ.ಎಸ್ ನಾಗಭೂಷಣ .ಅವರು ಇಲ್ಲಿ ಆಕಾಶವಾಣಿಯ ಸಹಾಯಕ ನಿರ್ದೆಸಕಾರಗಿದ್ದಾಗ ಪ್ರೊ. ಬಿ .ಪಿ .ವೀರೇನ್ದ್ರ ಕುಮಾರರ ಸಹಕಾರದೊಡನೆ ಅಭಿರುಚಿಯನ್ನು ಆರಂಭಿಸಿದರು .
ಇದುವರೆಗೆ ನಾಡಿನ ಹೆಸರಾಂತ ಸಾಹಿತಿಗಳು , ಸಾಂಸ್ಕೃತಿಕ ನೇತಾರರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ , ಅವರಲ್ಲಿ ಜಿ. ಎಸ್. ಸಿವರುದ್ರಪ್ಪನವರು , ಚಿದಾನಂದ ಮೂರ್ತಿಗಳು , ಚಂದ್ರಶೇಖರ ಕಂಬಾರರು , ಸಿದ್ದಲಿಂಗ ಪಟ್ಟಣಸೆತ್ತಿ , ಮುಂತಾದ ವಿದ್ವಾನ್ಸರಿದ್ದಾರೆ ಪ್ರತಿ ಆರು ತಿಂಗಳಿಗೊಮ್ಮೆ ವಿಶೇಷ ಕಾರ್ಯಕ್ರಮಗಳು ಆಯೋಜಿಸಲ್ಪದುತ್ತವೆ .ಅವುಗಳಲ್ಲಿ ಅತಿ ಮುಖ್ಯವಾದವುಗಳು ಚಿತ್ರದುರ್ಗದ ಜೋಗಿ ಮಟ್ಟಿಯಲ್ಲಿ ಮೂರೂ ದಿನಗಳ ಕಾಲ ನಡೆದ ಶಿವರಾಮ ಕಾರಂತರ ಕುರಿತ ಅಧ್ಯಯನ ಶಿಬಿರ , ಮಹಾಕವಿ ಪಂಪನ ಕಾವ್ಯ ಮೀಮಾಂಸೆ , ಮುಂತಾದುವುಗಳು ಮುಖ್ಯವಾದವುಗಳು .ಜಾನಪದ ಅಕ್ಯಾದಮಿಯೊಡನೆ , ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೊಡನೆ ಸಹಯೋಗದಿಂದ ಅನೇಕ ಕಾರ್ಯಕ್ರಮಗಳು ಸಹ ನೆರವೇರಿವೆ . ಅನೇಕ ಪುಸ್ತಕ ಬಿಡುಗಡೆ ಸಮಾರಂಭಗಳು , ಅಭಿರುಚಿಯಿಂದ ನೆರವೇರಿವೆ . ಅವುಗಳಲ್ಲಿ ಸ್ಥಳೀಯರ ಪುಸ್ತಕಗಳಲ್ಲದೆ ; ಲೋಹಿಯಾ ಪ್ರಕಾಶನದ , ಪುಸ್ತಕಗಳು , ಕನ್ನಡ ಸಂಸ್ಕೃತಿ ಇಲಾಖೆಯ ಪುಸ್ತಕಗಳೂ ಸೇರಿವೆ . ಹೀಗೆ ಸತತವಾಗಿ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯಲು ಅದರ ಸಂಚಾಲಕ ಬಿ .ಪಿ . ವೀರೇಂದ್ರ ಕುಮಾರರ ಸಂಘಟನಾ ಚಾತುರ್ಯ , ಸಮಾಧಾನಕರ ಮನಃ ಸ್ಥಿತಿ ಗಳೇ ಮುಖ್ಯ ಕಾರಣಗಳು .