

' ಕಾನೂರು ಹೆಗ್ಗದತಿಯಲ್ಲಿ ' (ಇಲ್ಲಿ ದ ತಪ್ಪಾಗಿದೆ ) ಆರಂಭದಲ್ಲಿಯೀ ಕುವೆಂಪು ಅವರು ಪರಿಚಯಿಸುವ ಕುರುವಳ್ಳಿಯ ಕಿರು ಪೀಟೆಗೂ ತೀರ್ಥಹಳ್ಳಿಗೂ ಸಂಪರ್ಕ ಕಲ್ಪಿಸುತ್ತಿದ್ದ ರಾಮತೀರ್ಥದ ಕಲ್ಲು ಸಾರದ ಅವಶ್ಯಕತೆ ಈಗ ಇಲ್ಲ . ಈಗ ತುಂಗೆಗೆ ಬೃಹತ್ ಸೇತುವೆ ನಿರ್ಮಾಣವಾಗಿದೆ .ಇದರಿಂದಾಗಿ ಮಳೆಗಾಲದಲ್ಲಿ ಉಕ್ಕಿ ಸೊಕ್ಕಿ ಹರಿಯುತ್ತಿದ್ದ ತುಂಗೆಯನ್ನು ದಾಟಲು ಬಳಸುತ್ತಿದ್ದ ಹರಿಗೋಲುಗಳ ಅವಶ್ಯಕತೆಯೂ ಈಗ ಇಲ್ಲ .
'ಮಲೆಗಳಲ್ಲಿ ಮದುಮಗಳಿನ ತುಂಗೆಯ ರುದ್ರ ರಮಣೀಯ ಆರ್ಭತದೆದುರು ಜೀವಗಳನ್ನು ಕೈಯ್ಯಲ್ಲಿ ಹಿಡಿದು ಪಯಣಿಸುತ್ತಿದ್ದ ಆ ಪಯಣಿಗರ ಸಾಹಸ ಯಾನ ಇನ್ನೆಲ್ಲಿ ?
ಕಾದಂಬರಿಯಲ್ಲಿ ಪುಟಗಟ್ಟಲೆ ವ್ಯಾಪಿಸಿರುವ ತುಂಗಾ ಯಾನದ ವಿವರಗಳು ಓದುಗನನ್ನೂ ನದಿಯ ಸೆಳವಿನೊಳಗೆ ಸೆಳೆದುಕೊಳ್ಳುತ್ತಿದ್ದ ಆ ಸುಮನೋಹರ ಭಯಂಕರ ವರ್ಣನೆಗಳು ಇನ್ನೆಲ್ಲಿ ?
ನಾಗರಿಕತೆಯ ಸವಲಭ್ಯಗಳುಮನುಷ್ಯ ಜೀವನದ ರೋಚಕತೆ , ಸಂಭ್ರಮ , ಕುತೂಹಲಗಲನ್ನು ಕೊಂದು ಹಾಕಿ ಬದುಕನ್ನು ನಿರ್ಜೀವ ಯಾನ್ತ್ರಿಕವನ್ನಾಗಿಸುತ್ತಿವೆಯೇ ?